ಮಳೆಗೆ ಶಾಲೆಗೆ ರಜೆ; ಶಾಲೆಗಳ ಲೈಸನ್ಸ್ ರದ್ದು: ದಕ್ಷಿಣ ಕನ್ನಡ ಡಿ.ಸಿ ಖಡಕ್ ಆದೇಶ


ಮಂಗಳೂರು: ಮಳೆ ಬಂದ ಸಂದರ್ಭದಲ್ಲಿ ಮಕ್ಕಳ ಸುರಕ್ಷತ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ. ಅದರೆ ಇದನ್ನು ಕೆಲ ಖಾಸಗೀ ಶಾಲೆಗಳು ದುರುಪಯೋಗಪಡಿಸಿಕೊಂಡು ರಜೆ ನೀಡಿದ ದಿನವೂ ಶಾಲೆಗಳಲ್ಲಿ ತರಗತಿಗಳನ್ನೂ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಇನ್ನೂ ಮುಂದಿನ ದಿನಗಳಲ್ಲಿ ಈ ರೀತಿಯ ದೂರುಗಳು ಕೇಳಿ ಬಂದಲ್ಲಿ ಆಯಾ ಶಾಲೆಗಳ ಲೈಸನ್ಸ್ ರದ್ದು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್ ಖಡಕ್ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ತಿಳಿಸಿರುವ ಅವರು ಮಳೆಯ ಕಾರಣಕ್ಕೆ ರಜೆ ನೀಡಿದ ಸಂಧರ್ಭದಲ್ಲಿ ಯಾವುದೇ ಕಾರಣಕ್ಕೂ ತರಗತಿಗಳನ್ನೂ ನಡೆಸಬಾರದು ಎಂದು ತಿಳಿಸಿದ್ದಾರೆ.