ಜವನೆರ್ ಬೆದ್ರ ಫೌಂಡೇಶನ್(ರಿ.) ವತಿಯಿಂದ ನಾಳೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಮಹಾ ರಕ್ತದಾನ ಶಿಬಿರ; ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಕರೆ


 ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಘಟನೆ ಕಳೆದ ಒಂದು ದಶಕಗಳಿಂದ ಸಮಾಜಮುಖಿ ಕೆಲಸ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರ ಜೊತೆಗೆ ಬೆದ್ರದ ಅತ್ಯಂತ ಚಿರಪರಿಚಿತ ಸಂಘಟನೆಗಳಲ್ಲಿ ಒಂದಾಗಿದೆ. ಸ್ವಚ್ಚತೆ, ಆರೋಗ್ಯ, ಧಾರ್ಮಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೂಡುಬಿದಿರೆಯ ಪರಿಸರದಲ್ಲಿ ತುರ್ತು ರಕ್ತದಾನದ ಅವಶ್ಯಕತೆಯಿದ್ದಾಗ ಮೊದಲು ನೆನಪಾಗುವುದು ಜವನೆರ್ ಬೆದ್ರ ಫೌಂಡೇಶನ್'ನ ರಕ್ತನಿಧಿ ಘಟಕ. ಕಳೆದ ೯ ವರ್ಷಗಳಲ್ಲಿ ಸುಮಾರು ೧೫ ಸಾವಿರಕ್ಕೂ ಅಧಿಕ ಯೂನಿಟ್ ರಕ್ತವನ್ನು ಅಗತ್ಯವಿರುವ ರೋಗಿಗಳಿಗೆ ಹಾಗೂ ಅಸ್ಪತ್ರೆಗಳಿಗೆ ನೀಡಿದ್ದು ಒಂದು ಬಹುದೊಡ್ಡ ಸಾಧನೆಯೇ ಸರಿ.

ರಕ್ತದಾನ ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದು. ಒರ್ವ ಆರೋಗ್ಯವಂತ ವ್ಯಕ್ತಿ ರಕ್ತವನ್ನು ದಾನ ನೀಡುವುದರಿಂದ ಸುಮಾರು ೪ ರೋಗಿಗಳ ಜೀವವನ್ನು ಉಳಿಸಬಹುದು ಈ ನಿಟ್ಟಿನಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಘಟನೆ ಪ್ರತಿ ವರ್ಷದಂತೆ ಈ ಬಾರಿಯೂ ಮಹಾರಕ್ತದಾನ ಹಾಗೂ ಸಸಿ ವಿತರಣಾ ಕಾರ್ಯಕ್ರಮ 27-06-2026ರ ಶನಿವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರ ನಡೆಯಲಿದ್ದು ಎಲ್ಲಾರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಶಿಬಿರದಲ್ಲಿ ಭಾಗಿಯಾಗುವಂತೆ ಸಮಿತಿ ಪ್ರಮುಖರು ವಿನಂತಿಸಿಕೊಂಡ್ಡಿದ್ದಾರೆ.

ಈ ಮಹಾರಕ್ತದಾನ ಶಿಬಿರಕ್ಕೆ ಪ್ರಾದೇಶಿಕ ರಕ್ತ ಪೂರಣ ಹಾಗೂ ಜಿಲ್ಲಾ ಅಸ್ಪತ್ರೆ ವೆನ್ಲಾಕ್ ಇಲ್ಲಿನ ವೈದ್ಯಾಧಿಕಾರಿಗಳು ಸಾಥ್ ನೀಡಲಿದ್ದಾರೆ. ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿರುವುದರಿಂದ ಪ್ರತಿಯೊಬ್ಬರು ಈ ಶಿಬಿರದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.