ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಘಟನೆ ಹಾಗೂ ಘಟಕಗಳ ಪದಗ್ರಹಣ - ಅಂತರರಾಷ್ಟ್ರೀಯ ಯೋಗ ದಿನ ಆಚರಣೆ


ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ.) ಹಾಗೂ ಅರ್ಟ್ ಆಫ್ ಲಿವಿಂಗ್'ನ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಭಾನುವಾರ ಆಚರಿಸಲಾಯಿತು.

ಜವನೆರ್ ಬೆದ್ರ ಫೌಂಡೇಶನ(ರಿ.) ಸಂಘಟನೆಯ ಎಕ್ಸಿಕ್ಯೂಟಿವ್ ಸಭೆಯೂ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಸಂಘಟನೆಯ ಹಾಗೂ ಘಟಕಗಳ ಪದಗ್ರಹಣ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಿತು. ಸಂಘಟನೆಯ ಬಲವರ್ಧನೆ ಹಾಗೂ ಮುಂದಿನ ದಿನಗಳಲ್ಲಿ ನಡೆಸಬೇಕಾಗಿರುವ ಸಾಮಾಜಿಕ ಕೆಲಸ ಕಾರ್ಯಗಳ ಬಗೆಗೆ ಚರ್ಚೆ ನಡೆಯಿತು. 

ಜವನೆರ್ ಬೆದ್ರ ಫೌಂಡೇಶನ(ರಿ.) ಸಂಘಟನೆಯ ಸಂಸ್ಥಾಪಕರಾದ ಅಮರ್ ಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಗೌರವ ಮಾರ್ಗದರ್ಶಕರಾದ ರಾಜೇಂದ್ರ ಜಿ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಗುರುಪ್ರಸಾದ್ ಹೊಳ್ಳ, ಸಂಘಟನೆಯ ಉಪಾಧ್ಯಕ್ಷ ರಾಜೇಶ್ ಕೋಟೆಗಾರ್, ನಾರಾಯಣ ಪಡುಮಲೆ, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಅಬ್ಬಕ್ಕ ಬ್ರಿಗೇಡ್'ನ ನಿಕಟಪೂರ್ವ ಸಂಚಾಲಕಿ ಸಹಾನ ನಾಯಕ್, ನೂತನ ಸಂಚಾಲಕಿ ಸುನೀತಾ ಉದಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಂದೀಪ್ ಕೆಲ್ಲಪುತ್ತಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.