ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ತಮಿಳುನಾಡು ರಾಜಕೀಯ.! ಬೇಡಿಕೆಗೆ ಒಪ್ಪಿದ್ರೆ ಬೆಂಬಲ.? 108 ಶಾಸಕರು ರಾಜೀನಾಮೆ.?


ತಮಿಳುನಾಡು: ಕರ್ನಾಟಕದ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಪೂರ್ಣ ಬಹುಮತ ಯಾವುದೇ ಪಕ್ಷಕ್ಕೂ ಬರದೆ ಇರುವ ಕಾರಣ ಕ್ಷಣಕ್ಕೊಂದು ರಾಜಕೀಯ ತಿರುವು ಪಡೆಯುತ್ತಿದೆ. ಖ್ಯಾತ ಚಿತ್ರನಟ ಥಳಪತಿ ವಿಜಯ್ ಅವರ ಟಿ.ವಿ.ಕೆ ಪಕ್ಷ 108 ಸ್ಥಾನಗಳನ್ನು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು ಕೂಡ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಟಿ.ವಿ.ಕೆ ಪಕ್ಷದ ಬಳಿ ಇಲ್ಲದಿರುವುದರಿಂದ ಈ ಆತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಬೇಡಿಕೆಗೆ ಒಪ್ಪಿದ್ರೆ ಟಿವಿಕೆಗೆ ಬೆಂಬಲ.?

ನಮ್ಮ ಬೇಡಿಕೆಗೆ ಟಿವಿಕೆಗೆ ಪಕ್ಷದ ಮುಖ್ಯಸ್ಥರು ಒಪ್ಪಿದ್ರೆ ನಾವು ಬೆಂಬಲ ನೀಡುತ್ತೇವೆ ಎಂದು ಎಡಪಕ್ಷದ ಮುಖ್ಯಸ್ಥರು ಹೇಳಿಕೆ ನೀಡುತ್ತಿರುವುದು ಮತ್ತೊಂದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸುಮಾರು 10 ಕ್ಕೂ ಅಧಿಕ ಸಂಖ್ಯಾಬಲ ಸರ್ಕಾರ ರಚಿಸಲು ಬೇಕಾಗಿರುವುದರಿಂದ ಟಿವಿಕೆ ಪಕ್ಷದ ನಾಯಕ ವಿಜಯ್ ಭಾರೀ ಕಸರತ್ತು ಮಾಡುತ್ತಿದ್ದಾರೆ.

ಡಿ.ಎಂ.ಕೆ ಹಾಗೂ ಎ.ಐ.ಡಿ.ಎಂ.ಕೆ ಮೈತ್ರಿ.?

ಈ ಎಲ್ಲಾ ಆಚ್ಚರಿ ಬೆಳವಣಿಗೆಗಳ ಮಧ್ಯೆ ರಾಜಕೀಯದ ಬದ್ದ ವೈರಿಗಳಾದ ಡಿ.ಎಂ.ಕೆ ಹಾಗೂ ಎ.ಐ.ಡಿ.ಎಂ.ಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಿದೆ ಎಂಬ ಸುದ್ದಿಗಳು ಚರ್ಚೆಯಾಗುತ್ತಿರುವುದು ಮತ್ತೊಂದು ಆಚ್ಚರಿ. ಅದರೆ ಈ ಮೈತ್ರಿ ಆಗುವುದು ಬಹಳಷ್ಟು ಕಷ್ಟಕರ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು.

108 ಶಾಸಕರು ರಾಜೀನಾಮೆ.?

ಟಿ.ವಿ.ಕೆ ಪಕ್ಷ ಸರ್ಕಾರ ರಚಿಸಲು ವಿರೋಧ ಪಕ್ಷಗಳು ಆಡ್ಡಿ ಪಡಿಸಿದರೆ ಟಿ.ವಿ.ಕೆಯ ಎಲ್ಲಾ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

ಒಟ್ಟಾರೆಯಾಗಿ ತಮಿಳುನಾಡು ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆಗಳು ನಡೆಯುತ್ತಿದ್ದು ೧೧೭ ಶಾಸಕರ ಬೆಂಬಲವನ್ನು ತೋರಿಸುವ ಅನಿವಾರ್ಯತೆಯಿದ್ದು ಸರ್ಕಾರ ರಚಿಸುವ ದೊಡ್ಡ ತಲೆಬಿಸಿ ಸರ್ಕಾರ್'ಗೆ ಎದುರಾಗಿದೆ.