ದ್ವೈತ ವೇದಾಂತ ಸಾಧನೆಗಾಗಿ ಶ್ರೀ ಪವನ್ ಭಟ್ ಅವರಿಗೆ ಸ್ವರ್ಣ ಪದಕ ಗೌರವ


ಎಸ್.ಎಂ.ಎಸ್.ಪಿ. ಸಂಸ್ಕೃತ ಸ್ನಾನಕ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಯಾಗಿದ್ದ ಮೂಡುಬಿದರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. ಎಂ. ಹರೀಶ್ ಭಟ್ ಅವರ ಪುತ್ರ ಎಂ.ಪವನ್ ಭಟ್ ಅವರಿಗೆ 2024-25ನೇ ಸಾಲಿನ ಆಚಾರ್ಯ ( ಎಂ.ಎ) ದ್ವೈತ ವೇದಾಂತದಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಉತೀರ್ಣರಾಗಿರುವುದಕ್ಕಾಗಿ 'ಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮೀಜಿ ಸ್ವರ್ಣಪದಕ ' ಮತ್ತು 'ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿ ಸ್ವರ್ಣಪದಕ' ಪುರಸ್ಕಾರ ದೊರೆತಿದೆ.


ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕದ ರಾಜ್ಯಪಾಲ , ವಿವಿಯ ಕುಲಾಧಿಪತಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಯದ ಕುಲಾಧಿಪತಿಗಳೂ ಆದ ಶ್ರೀ ಥಾವರ್ ಚಂದ್ ಗೆಪ್ಲೋಟ್ ಅಧ್ಯಕ್ಷತೆಯಲ್ಲಿ ಜರಗಿದ ವಿಶ್ವವಿದ್ಯಾಲಯದ ಹನ್ನೆರಡು ಮತ್ತು ಹದಿಮೂರನೆಯ ದೀಕ್ಷಾಂತ ಘಟಿಕೋತ್ಸವದಲ್ಲಿ ಪವನ್ ಭಟ್ ಅವರು ರಾಜ್ಯಪಾಲರಿಂದ ಈ ಗೌರವ ಸ್ವೀಕರಿಸಿದರು.