ಪುತ್ತೂರು: ಬೊಳುವಾರು ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನ (ರಿ ) ಇವರಿಂದ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ


ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನ ಬೊಳುವಾರು ಇದರ ವತಿಯಿಂದ ನಡೆಸುವ ಯಕ್ಷಗಾನ ನಾಟ್ಯ ತರಗತಿಯನ್ನು ದಿನಾಂಕ 12.04.2026ರಂದು ಉದ್ಘಾಟಿಸಲಾಯಿತು. ಹಿರಿಯ ಯಕ್ಷಗಾನ ಭಾಗವತರು ಹಾಗೂ ಹಿಂಮೇಳ ಗುರುಗಳಾದ ಗೋವಿಂದ ನಾಯಕ್ ಪಾಲೆಚ್ಚಾರು ದೀಪ ಬೆಳಗಿಸಿ ಉದ್ಘಾಟಿಸಿ ಪ್ರತಿಷ್ಠಾನ ನಡೆದು ಬಂದ ಬಗೆ ಮತ್ತು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಶುಭ ಕೋರಿದರು. 

ದೇವಳದ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್ ಬಳ್ಳಾಲ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ನಾಟ್ಯ ಗುರುಗಳಾದ ಪ್ರಚೇತ್ ಆಳ್ವ ನಾಟ್ಯ ಪ್ರಾತ್ಯಕ್ಷಿಕೆ ಮೂಲಕ ನಾಟ್ಯ ತರಗತಿಯನ್ನು ಪ್ರಾರಂಭಿಸಿದರು. ಪ್ರತಿಷ್ಠಾನದ ಸದಸ್ಯರಾದ ರಾಮ ಕೃಷ್ಣ ನಾಯಕ್ , ವಸಂತ ನಾಯಕ್ ಅಜೇರು, ಗಣೇಶ್ ಡಿ ಎಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಸಂಹಿತಾ ಮತ್ತು ಕು. ಶ್ರೀಯಾ ಪ್ರಾರ್ಥಿಸಿದರು. ರಾಮ ಕೆ ಕಾರ್ಯಕ್ರಮ ನಿರೂಪಿಸಿದರು. ವಸಂತ ನಾಯಕ್ ಅಜೇರು ಎಲ್ಲರನ್ನು ಸ್ವಾಗತಿಸಿದರು. ಪ್ರತಿಷ್ಠಾನದ ಸದಸ್ಯರಾದ ರಾಮ್ ಪ್ರಕಾಶ್ ವಂದಿಸಿದರು. ಪ್ರತಿಷ್ಠಾನದ ಸದಸ್ಯ ವಸಂತ ನಾಯಕ್ ಅಜೇರು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದರು.