ಮೂಡುಬಿದಿರೆ:ಗಾಂಧಿನಗರದಲ್ಲಿ ರಿಕ್ಷಾ ಡಿಕ್ಕಿ - ಪಾದಚಾರಿಗೆ ಗಂಭೀರ ಗಾಯ


ಮೂಡುಬಿದಿರೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಗಾಂಧಿನಗರದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಂಧಿನಗರದ ಕರ್ದಬೆಟ್ಟು ನಿವಾಸಿ ಶಂಕರ್ ಆಚಾರ್ಯ ಅಪಘಾತಕ್ಕೊಳಗಾದ ದುರ್ದೈವಿ.

ಇವರು ಮೂಡುಬಿದಿರೆಯಿಂದ ಗಾಂಧಿನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಶೇಖರ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಶಂಕರ್ ಆಚಾರ್ಯ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.