ಮೂಡುಬಿದಿರೆ ಪುರಸಭೆಯ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜ್ ಪೂಜಾರಿಯವರ ಲಲಿತ ಸ್ವೀಟ್ಸ್ & ಮಿಲ್ಕ್ ಪಾರ್ಲರ್ ಶುಭಾರಂಭ


ಮೂಡುಬಿದಿರೆ: ತಾಲೂಕಿನ ಪುರಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿಯವರ ನೂತನ 'ಲಲಿತ ಸ್ವಿಟ್ಸ್' ಮಳಿಗೆ ಆರ್.ಆರ್ ಪ್ಲಾಜಾದ ಪ್ರಸಿದ್ದ್ ಸಿಲ್ಕ್ ಬಳಿಯಿರುವ ಆಳ್ವಾಸ್-ಸ್ವರಾಜ್ ಮೈದಾನ್ ಪಕ್ಕದಲ್ಲಿರುವ ಕಟ್ಟಡದಲ್ಲಿ ಶುಭಾರಂಭಗೊಂಡಿದೆ. 

ನೂತನ ಮಳಿಗೆಯ ಶುಭಾರಂಭದ ಕಾರ್ಯಕ್ರಮದಲ್ಲಿ ಕೆ.ಎಂ.ಎಫ್ ಮಾಜಿ ಅಧ್ಯಕ್ಷರಾದ ಕೆ.ಪಿ ಸುಚಾಲಿತ ಶೆಟ್ಟಿ, ಪುರಸಭೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಂಧು ಎಂ, ಪುರಸಭೆಯ ಅಧ್ಯಕ್ಷರಾದ ಜಯಶ್ರೀ ಕೇಶವ್, ಗೋಪಾಲ್ ಶೆಟ್ಟಿಗಾರ್, ಭರತ್ ಶೆಟ್ಟಿ, ಆಜಯ್ ರೈ, ಉದಯ್ ಕುಮಾರ್ ಶೆಟ್ಟಿ, ಪ್ರಶಾಂತ್ ಅಂಚನ್ ಗುರುಸ್ವಾಮಿಗಳು ಒಂಟಿಕಟ್ಟೆ, ಗೋಪಾಲ್ ಬಂಗೇರ, ಶಶೀಧರ್ ಭಂಡಾರಿ ನಾಗರಕಟ್ಟೆ, ಪ್ರಕಾಶ್ ಕೆಮಾರು, ರಾಜೇಶ್ ನಾಯ್ಕ್,  ಪಿ.ಡಿ ಸುವರ್ಣ ಮುಂಬೈ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಹೈನು ಉತ್ಪನ್ನಗಳು ಮತ್ತು ರುಚಿಕರವಾದ ಸಿಹಿತಿಂಡಿಗಳನ್ನು ಕೈಗೆಟಕುವ ದರದಲ್ಲಿ ಜನತೆಗೆ ನೀಡಬೇಕು ಎಂಬ ಸಂಕಲ್ಪದೊಂದಿಗೆ ನಮ್ಮ ನೂತನ ಮಳಿಗೆಯನ್ನು ಪ್ರಾರಂಭಿಸಿದ್ದೇವೆ ಎಂದು ಮಾಲೀಕರಾದ ನಾಗರಾಜ್ ಪೂಜಾರಿ ತಿಳಿಸಿದ್ದಾರೆ.

ನಂದಿನಿ ಉತ್ಪನ್ನಗಳು: ತಾಜಾ ಹಾಲು, ಮೊಸರು, ಮಜ್ಜಿಗೆ, ತುಪ್ಪ ಮತ್ತು ಪನೀರ್ ಸೇರಿದಂತೆ ಎಲ್ಲಾ ತರಹದ ನಂದಿನಿ ಉತ್ಪನ್ನಗಳು ದೊರೆಯುತ್ತವೆ.

ಹೋಲ್‌ಸೇಲ್ ಮತ್ತು ರಿಟೇಲ್: ಎಲ್ಲಾ ಉತ್ಪನ್ನಗಳು ಹೋಲ್‌ಸೇಲ್ ಮತ್ತು ರಿಟೇಲ್ ದರದಲ್ಲಿ ಲಭ್ಯವಿರುವುದು ವಿಶೇಷ.

ಸಿಹಿತಿಂಡಿಗಳು ಮತ್ತು ಸ್ನಾಕ್ಸ್: ಮೈಸೂರು ಪಾಕ್, ಪೇಡಾ, ಕುಂದಾ, ಚಾಕೊಲೇಟ್ ಮಿಲ್ಕ್ ಶೇಕ್, ಮತ್ತು ವಿವಿಧ ಬಗೆಯ ಕೇಕ್ ಹಾಗೂ ಮಫಿನ್ಸ್ ಇಲ್ಲಿ ಲಭ್ಯ.

​ಫ್ಲೇವರ್ಡ್ ಮಿಲ್ಕ್: ಪಿಸ್ತಾ, ಬಾದಾಮಿ ಮತ್ತು ಚಾಕೊಲೇಟ್ ಫ್ಲೇವರ್‌ನ ನಂದಿನಿ ಗುಡ್ ಲೈಫ್ ಹಾಲು ಸಹ ಇಲ್ಲಿ ದೊರೆಯುತ್ತದೆ.