ಬೆಂಗಳೂರು: ಕರ್ನಾಟಕದ್ದು ಐಪಿಎಸ್ ಅಧಿಕಾರಿಯೊಬ್ಬರದ್ದು ಎನ್ನಲಾದ ರಾಸಲೀಲೆ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಕನ್ನಡದ ಸುದ್ದಿ ಮಾಧ್ಯಮಗಳಲ್ಲಿ ಈ ಬಗ್ಗೆ ಭಾರೀ ಸುದ್ದಿಯಾಗುತ್ತಿದ್ದು, ಐಪಿಎಸ್ ಅಧಿಕಾರಿಯಾದ ರಾಮಚಂದ್ರ ರಾವ್ ಅವರು ಈ ವಿಡಿಯೋದಲ್ಲಿರುವವರು ಎಂದು ಹೇಳಲಾಗುತ್ತಿದೆ.
ಕರ್ತವ್ಯದ ಯುನಿಫಾರ್ಮ್ ನಲ್ಲಿರುವಾಗಲೇ ಈ ವಿಡಿಯೋವನ್ನು ತೆಗೆದಿರುವ ರೀತಿಯಲ್ಲಿ ದೃಶ್ಯ ಕಾಣುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಚಿನ್ನದ ಕೇಸ್ ನಲ್ಲಿ ಸುದ್ದಿಯಾಗಿದ್ದ ರನ್ಯಾ ರಾವ್ ಅವರ ಮಲ ತಂದೆ ಈ ರಾಮಚಂದ್ರ ರಾವ್.
ಎಐ ವಿಡಿಯೋ ನನಗೇನು ಗೊತ್ತಿಲ್ಲ ಎಂದ ಐಪಿಎಸ್ ಅಧಿಕಾರಿ:
ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳು ಈ ಬಗ್ಗೆ ಸ್ಪಷ್ಟನೆ ಕೇಳಿದ್ದು ಆ ವಿಡಿಯೋಗೂ ನನಗೂ ಸಂಬಂಧವಿಲ್ಲ, ಎಐ ವಿಡಿಯೋದಲ್ಲಿ ಯಾವ ರೀತಿಯ ವಿಡಿಯೋವನ್ನಾದರೂ ಮಾಡಬಹುದು ಎಂದು ಹೇಳಿಕೆ ನೀಡಿದ್ದಾರೆ.
