ಮಂಗಳೂರು: ಕಾಸರಗೋಡು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ಕನ್ನಡ ಭವನದ ರಜತ ಸಂಭ್ರಮ ನಾಡು ನುಡಿ ಹಬ್ಬ ಸಮಾರಂಭವು ಕನ್ನಡ ಭವನದ ಬಹಳ ಅದ್ದೂರಿಯಾಗಿ ಶ್ರೀ ವಾಮನ್ ರಾವ್ ಬೇಕಲ್ ಇವರ ನೇತೃತ್ವದಲ್ಲಿ ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ನಡೆಯಿತು.
ಕನ್ನಡ ಭವನದ ಸಾರಥಿಗಳಾದ ಸಂಸ್ಥಾಪಾಕಾಕ್ಷರು ಶ್ರೀಯುತ ವಾಮನ್ ರಾವ್ ಬೇಕಲ್ ಹಾಗೂ ಶ್ರೀಮತಿ ಸಂಧ್ಯಾ ರಾಣಿ ಟೀಚರ್. ರಜತ ಮಹೋತ್ಸವದ ಈ ಸುಸಂದರ್ಭದಲ್ಲಿ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರೂ, ವೃತ್ತಿಯಲಿ ಶಿಕ್ಷಕಿಯೂ, ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯು ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ರೇಖಾ ಸುದೇಶ್ ರಾವ್ ಇವರನ್ನು ಕನ್ನಡ ಭವನ ಕಾಸರಗೋಡು ಜಿಲ್ಲಾ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಇವರ ಸಮಾಜಮುಖಿ ಕಾರ್ಯ ಚಟುವಟಿಕೆ, ಸಂಘಟನೆ, ಸಾಹಿತ್ಯ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲಿನ ಕಾರ್ಯ ವೈಖರಿಯನ್ನು ಪರಿಗಣನೆಗೆ ತೆಗೆದುಕೊಂಡು ಶ್ರೀ ಶ್ರೀ ಭಿಕ್ಷು. ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026 ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಪ್ರಭಾಕರ್ ಎಚ್, ಡಾ .ರವೀಂದ್ರ ಜೆಪ್ಪು, ಡಾ.ಸತೀಶ್, ಡಾ. ರಾಜೇಶ್, ಶ್ರೀ ಶ್ರೀನಿವಾಸ ಶೇರ್ವೆಗಾರ್, ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ , ಉಮೇಶ್ ರಾವ್ ಕುಂಬ್ಳೆ , ಶ್ರೀ ಜಯಾನಂದ ಪೆರಾಜೆ, ಶ್ರೀ ಜೆ.ಕೆ.ರಾವ್ ಹಾಗೂ ವೆಂಕಟರಮಣ ಹೊಳ್ಳ ಉಪಸ್ಥಿತರಿದ್ದರು. ಶ್ರೀಮತಿ ರೇಖಾ ಸುದೇಶ್ ರಾವ್ ಕಾರ್ಯಕ್ರಮದ ಸಮಾರೋಪ ಸಮಾರಂಭದ ನಿರೂಪಣೆಗೈದರು.