ಮೂಡುಬಿದಿರೆ: ಹಿಂದೂ ಸಂಗಮ: ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಚಾಲನೆ


ಮೂಡುಬಿದಿರೆ: RSS ಶತಮಾನೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಮೂಡುಬಿದಿರೆಯ ಅಬ್ಬಕ್ಕ ಪಾರ್ಕಿನ ಚೌಟ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆಯಿತು. ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ  ಚಾಲನೆ ನೀಡಲಾಯಿತು.

ಚೌಟ ವಂಶಸ್ಥರಾದ ಕುಲದೀಪ್.ಎಂ ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರು ಸುದರ್ಶನ್ ಎಂ, ಚಂದ್ರಹಾಸ್, ಮಾಜಿ ಕೌನ್ಸಿಲರ್ ನಾಗರಾಜ್ ಪೂಜಾರಿ, ಮಾಜಿ ಅಧ್ಯಕ್ಷರಾದ ಪ್ರಸಾದ್ ಭಂಡಾರಿ, ಜವನೆರ್ ಬೆದ್ರ ಸ್ಥಾಪಕ ಅಮರ್ ಕೋಟೆ, ಶಾಂತರಾಮ್ ಕುಡ್ವ, ಜವನೆರ್ ಬೆದ್ರ ಸಂಘಟನೆಯ ದಿನೇಶ್ ನಾಯಕ್, ಶಮಿತ್ ರಾವ್, ಮನು ಒಂಟಿ ಕಟ್ಟೆ, ಸಹನಾ ನಾಯಕ್, ರಾಧಿಕಾ ರಾವ್  ಮತ್ತಿತರರು ಉಪಸ್ಥಿತರಿದ್ದರು.