ಮೂಡುಬಿದಿರೆ: ವನಿತಾ ಬೆದ್ರ ಅವರ ಸಾಹಿತ್ಯ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ "ಬಣ್ಣದ ಚಿಟ್ಟೆ" ಎಂಬ ಹೆಸರಿನ ಮಕ್ಕಳ ಮನೋರಂಜಿತ ಕನ್ನಡ ಆಲ್ಬಮ್ ಸಾಂಗ್ ಅಧ್ಬುತವಾಗಿ ಮೂಡು ಬಂದಿದ್ದು, ಇದನ್ನು "VBG Creation" ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಲಾಗಿದೆ. ಉತ್ಸಾಹಿ ಗೆಳತಿಯರ ತಂಡವೊಂದು ಈ ಆಲ್ಬಮ್ ಸಾಂಗ್ ರಚನೆಯ ಪ್ರಯತ್ನ ಮಾಡಿದ್ದು, ಇವರ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರದ ಅತ್ಯಗತ್ಯ.
"ಬಣ್ಣದ ಚಿಟ್ಟೆ" ಆಲ್ಬಮ್ ಸಾಂಗ್'ಗೆ ಪ್ರೀತಮ್ ಹಾಗೂ ಸುಪ್ರಿತಾ ಸಂಗೀತ ನಿರ್ದೇಶನ ಮಾಡಿದ್ದು, ಪಜ್ವಲ್.ಎಸ್ ಮೂಡುಬಿದಿರೆ ಡಿ.ಒ.ಪಿ ಕೆಲಸ ನಿರ್ವಹಿಸಿದ್ದಾರೆ. ಆನ್ವಿ ಕೆ.ಎಸ್, ಸಾದ್ವಿ ಎ. ಎಚ್ ಆಲ್ಬಮ್ ಸಾಂಗ್ ನಲ್ಲಿ ಆಭಿನಯಿಸಿದ್ದಾರೆ. ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ರವಿ ಪಾಂಬಾರ್, ಆಶಾ ಹರೀಶ್, ಅಶ್ವೇತ ನಾರಾಯಣ ಪಡುಮಲೆ ಹಾಗೂ ಶ್ರೀ ರಾಮಾಂಜನೇಯ ಲೇಡಿಸ್ ಮತ್ತು ಮಲ್ಟಿ ಜಿಮ್ ಮೂಡುಬಿದಿರೆ ಇವರುಗಳ ಸಹಕಾರದಲ್ಲಿ ಈ ಅಧ್ಬುತ ಮಕ್ಕಳಿಗೆ ಮನೋರಂಜನೆ ನೀಡುವ "ಬಣ್ಣದ ಚಿಟ್ಟೆ" ಆಲ್ಬಮ್ ಸಾಂಗ್ ನಿರ್ಮಾಣವಾಗಿದೆ.
ಈ ಉತ್ಸಾಹಿ ತಂಡದಿಂದ ಇನ್ನೂ ಹೆಚ್ಚಿನ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಮೂಡಿ ಬರಬೇಕಾದರೆ ಎಲ್ಲಾರೂ "VBG Creation" ಯೂಟ್ಯೂಬ್ ಚಾನೆಲ್ ಶೇರ್ ಮತ್ತು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಪ್ರೋತ್ಸಾಹ ನೀಡಬೇಕಿದೆ.