ಪುತ್ತೂರು: ನೆಲ್ಲಿಕಟ್ಟೆ ಮಿತ್ರ ಮಂಡಲ(ರಿ.) ಸಂಘಟನೆಗೆ ಈ ವರ್ಷ 50ನೇ ವರ್ಷದ ಸಂಭ್ರಮ. ಈ ನಿಟ್ಟಿನಲ್ಲಿ ನೆಲ್ಲಿಕಟ್ಟೆ ಮಿತ್ರ ಮಂಡಲ(ರಿ.) ಸಂಘಟನೆ ವೈಭವದ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು ಅದರ ಪೂರ್ವಭಾವಿಯಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ದಿನಾಂಕ 17-01-2025ರಂದು ಶನಿವಾರ ಹಮ್ಮಿಕೊಂಡಿದೆ.
ನೆಲ್ಲಿಕಟ್ಟೆ ಮಿತ್ರ ಮಂಡಲಿ(ರಿ.), ಪುತ್ತೂರು ಸಿಟಿ ರೋಟರಿ ಕ್ಲಬ್, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಪುತ್ತೂರಿನ ರಾಧಕೃಷ್ಣ ಮಂದಿರದ ಬಳಿಯಿರುವ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಈ ರಕ್ತದಾನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರೋಟರಿ ಬ್ಲಡ್ ಬ್ಯಾಂಕ್ ನ ವೈದ್ಯಕೀಯ ಅಧಿಕಾರಿ ಡಾ. ಸೀತರಾಮ್ ಭಟ್ ಭಾಗಿಯಾಗಲಿದ್ದಾರೆ.
ಸಮಾನ ಮನಸ್ಕರ ತಂಡವೊಂದು ಅಂದು ಆರಂಭಿಸಿದ ಮಿತ್ರ ಮಂಡಲಿಗೆ ಇಂದು 'ಸುವರ್ಣ ಮಹೋತ್ಸವದ ಸಂಭ್ರಮ'. ಕಳೆದ ೫೦ ವರ್ಷಗಳಲ್ಲಿ ನೆಲ್ಲಿಕಟ್ಟೆ ಮಿತ್ರ ಮಂಡಲಿ(ರಿ.) ನಡೆದು ಬಂದ ಹಾದಿಯನ್ನು ಒಂದು ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.