ಮುಂಬೈ: ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಮುಂಬೈಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡುವ ಸನಿಹದಲ್ಲಿದೆ. ಒಂದು ರಾಜ್ಯದ ವಿಧಾನಸಭಾ ಚುನಾವಣೆಯಷ್ಟೇ ಪ್ರಾಮುಖ್ಯತೆ ಪಡೆದಿರುವ ಮಹಾರಾಷ್ಟ್ರ ಪಾಲಿಕೆ ಚುನಾವಣೆ ಕಳೆದ ವಾರ ನಡೆದಿದ್ದು, ಅದರ ಫಲಿತಾಂಶ ಹೊರಬೀಳುತ್ತಿದ್ದು ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಬಹುತೇಕ ಗೆಲುವು ಸಾಧಿಸಿದೆ.
1700 ಆಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತಿದ್ದು ಸುಮಾರು 227 ವಾರ್ಡ್ ಗಳ ಪೈಕಿ ಬಿಜೆಪಿ ಹಾಗೂ ಶಿವಸೇನಾ ನೇತೃತ್ವದ MVA ಸುಮಾರು 119 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಠಾಕ್ರೆ ಸಹೋದರರ ನೇತೃತ್ವದ UBT-MNS ಪಕ್ಷಗಳು 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಹಾಗೂ ಕಾಂಗ್ರೆಸ್ ಪಕ್ಷಗಳು ಕೇವಲ 13 ಪಕ್ಷಗಳಲ್ಲಿ ಮುನ್ನಡೆ ಸಾಧಿಸಿದ್ದು ಈ ಮೂಲಕ ೩೦ ವರ್ಷಗಳಲ್ಲಿ ಉದ್ದವ್ ಠಾಕ್ರೆ ಬಣದ ಮಹಾಪೌರ ಆಯ್ಕೆಯಾಗುತ್ತಿದ್ದು ಈ ಬಾರಿ ಬಿಜೆಪಿ ಮೈತ್ರಿ ತನ್ನ ಮಹಾಪೌರನನ್ನು ಅಧಿಕಾರದ ಗದ್ದುಗೆಯನ್ನು ಏರುವಲ್ಲಿ ಸಫಲವಾಗಿದೆ.
ಬಿಜೆಪಿ ಪಕ್ಷಕ್ಕೆ ಇದೊಂದು ಐತಿಹಾಸಿಕ ಗೆಲುವಾಗಿದ್ದು, ಈ ಮೂಲಕ ಮತ್ತೊಮ್ಮೆ ಪಾರುಪತ್ಯ ಮೆರೆದಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತೇ ಅದೇ ನಿರಾಶೆ ಉಂಟಾಗಿದ್ದು, ಬಿಜೆಪಿ ತನ್ನ ಗೇಮ್ ಪ್ಲಾನ್ ಮತ್ತೊಮ್ಮೆ ಸಫಲವಾಗಿದೆ.