ತುಳುನಾಡಿನ ಇತಿಹಾಸದಲ್ಲಿ ಮಹಿಳಾ ಶಕ್ತಿಯ ಪರಾಕ್ರಮದ ಚಿಹ್ನೆಯಾದ ವೀರರಾಣಿ ಅಬ್ಬಕ್ಕ ಚೌಟರು, ಕೇವಲ ಯೋಧ'ಳಾಗಿಯೇ ಅಲ್ಲದೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಶ್ರಯದಾತೆಯೂ ಆಗಿದ್ದರು. ಪೋರ್ಚುಗಿಸರ ಆಕ್ರಮಣಕ್ಕೆ ಎದುರಾಗಿ ನಿಂತ ಈ ರಾಣಿ, ಮಂಗಳೂರು, ಮೂಡಬಿದ್ರೆ ಮತ್ತು ಉಲ್ಲಾಳದ ದೇವಾಲಯಗಳಿಗೆ ಹೊಸ ಉಜ್ವಲತೆ ನೀಡಿದವರು.
ಉಲ್ಲಾಳ ಶ್ರೀ ಲಕ್ಷ್ಮೀನಾರಾಯಣ ದೇವಾಲಯ:
ಅಬ್ಬಕ್ಕರ ಆಡಳಿತ ಕೇಂದ್ರವಾಗಿದ್ದ ಉಲ್ಲಾಳದಲ್ಲಿರುವ ಉಲ್ಲಾಳ ಶ್ರೀ ಲಕ್ಷ್ಮೀನಾರಾಯಣ ದೇವಾಲಯ ದೇವಾಲಯವೇ ಅವರ ಧಾರ್ಮಿಕ ನಂಟಿನ ಪ್ರಮುಖ ಸ್ಮಾರಕ. 1559ರ ಉಲ್ಲಾಳ ಶಾಸನದಲ್ಲಿ “ಚೌಟೆಯರು ದೇವಾಲಯಕ್ಕೆ ಕಲ್ಲಿನ ಗೋಪುರ ಕಟ್ಟಿಸಿ, ಧನದಾನ ಮಾಡಿದರೆಂಬ ಉಲ್ಲೇಖ” ಇದೆ.
ಇದು ಅಬ್ಬಕ್ಕರು ಸ್ವತಃ ನಿರ್ಮಿಸಿದ ಅಥವಾ ಪುನರ್‌ನಿರ್ಮಿಸಿದ ದೇವಾಲಯವೆಂದು ಇತಿಹಾಸಕಾರರು ದೃಢಪಡಿಸಿದ್ದಾರೆ.ಈ ದೇವಾಲಯವನ್ನು ಅವರು ತಮ್ಮ ರಾಜಧಾನಿಯ ಧಾರ್ಮಿಕ ಕೇಂದ್ರವೆಂದು ಪರಿಗಣಿಸಿದ್ದರು. ದೇವಾಲಯದ ಉತ್ಸವಗಳು ಅವರ ಕಾಲದಲ್ಲೇ ರಾಜಾಶ್ರಯ ಪಡೆದವು.
ಕಂಕನಾಡಿ ಶ್ರೀ ವೆಂಕಟರಮಣ ದೇವಾಲಯ:
ಮಂಗಳೂರಿನ ವ್ಯಾಪಾರಿಗಳ ಸಹಾಯದಿಂದ ನಿರ್ಮಿತ ಈ ದೇವಾಲಯಕ್ಕೂ ಅಬ್ಬಕ್ಕರ ಧನಸಹಾಯ ದೊರಕಿದೆ.
ಕೋಲೋನಿಯಲ್ ದಾಖಲೆಗಳು ಹೇಳುವುದೇನೆಂದರೆ, ಅಬ್ಬಕ್ಕರು ಬಂದರು ತೆರಿಗೆ ವಿನಾಯಿತಿ ನೀಡಿದ ವೇಳೆ ದೇವಾಲಯದ ನಿರ್ಮಾಣ ಮುಂದುವರಿಯಿತು. ಈ ರೀತಿಯಾಗಿ ಅವರು ವ್ಯಾಪಾರ ಮತ್ತು ಧರ್ಮದ ಸಂಧಾನ ಸಾಧಿಸಿದರು.
ಸೋಮೇಶ್ವರ ಶ್ರೀ ಸೋಮನಾಥ ದೇವಾಲಯ:
ಉಲ್ಲಾಳದ ದಕ್ಷಿಣದ ಸಮುದ್ರತೀರದಲ್ಲಿರುವ ಸೋಮೇಶ್ವರ ದೇವಾಲಯದ ರಕ್ಷಣೆಯಲ್ಲಿ ಅಬ್ಬಕ್ಕರ ಪಾತ್ರ ಸ್ಪಷ್ಟವಾಗಿದೆ. 1568ರ ಪೋರ್ಚುಗಿಸ್ ಗ್ರಂಥ Jornada do Reino de Canaraಯಲ್ಲಿ, “ಉಲ್ಲಾಳ ರಾಣಿಯ ಸೇನೆ ದೇವಾಲಯದ ಕಡೆ ಕಾವಲು ನಿಂತು, ದಾಳಿಯನ್ನು ತಡೆದಳು” ಎಂಬ ಉಲ್ಲೇಖವಿದೆ. ಇದರಿಂದ ದೇವಾಲಯವನ್ನು ರಕ್ಷಿಸಲು ಅವರು ನೇರವಾಗಿ ಮುಂದಾದರು ಎಂಬುದು ಸ್ಪಷ್ಟವಾಗುತ್ತದೆ.
ಮೂಡಬಿದಿರೆ ಬಸದಿ – ಜೈನ ಆಶ್ರಯ
ಅಬ್ಬಕ್ಕರು ಜೈನ ಚೌಟ ವಂಶದವರಾಗಿದ್ದರೂ ಧರ್ಮಸಹಿಷ್ಣು ಮನೋಭಾವದಿಂದ ಎಲ್ಲ ಧರ್ಮಗಳಿಗೂ ಗೌರವ ನೀಡಿದರು. ಆದರೆ ತಮ್ಮ ಮೂಲ ಜೈನ ಪರಂಪರೆಗೆ ಅವರು ವಿಶಿಷ್ಟ ಆಶ್ರಯ ನೀಡಿದರು. ಮೂಡಬಿದಿರೆಯ “ಸಾವಿರ ಕಂಬ ಬಸದಿಯ ಪುನರ್‌ನಿರ್ಮಾಣ”ಕ್ಕೆ ಅವರು ಧನಸಹಾಯ ನೀಡಿದರೆಂಬ 1564ರ ಶಿಲಾಶಾಸನದಲ್ಲಿ
“ಅಬ್ಬಕ್ಕ ದೇವಿ ಚೌಟೆ ಅಳಿಯಾರ” ಎಂಬ ಹೆಸರಿನ ಉಲ್ಲೇಖ ಕಂಡುಬರುತ್ತದೆ. ಇದು ಅವರ ಜೈನ ಧಾರ್ಮಿಕ ನಿಷ್ಠೆಯ ದಾಖಲೆ.
ವೀರರಾಣಿ ಅಬ್ಬಕ್ಕರು ಕೇವಲ ಕತ್ತಿಯ ಯೋಧಿಯಾಗಿರಲಿಲ್ಲ ಬದಲಾಗಿ ಅವರು ಕಲಾ, ಧರ್ಮ ಮತ್ತು ಸಂಸ್ಕೃತಿಯ ರಕ್ಷಕಿ. ಅವರ ನಿರ್ಮಿಸಿದ ದೇವಾಲಯಗಳು ಮತ್ತು ಆಶ್ರಯದಾತೃತ್ವವು ತುಳುನಾಡಿನ ಆಧ್ಯಾತ್ಮಿಕ ಪರಂಪರೆಯನ್ನು ಜೀವಂತವಾಗಿಟ್ಟಿವೆ. ಉಲ್ಲಾಳದ ದೇವಾಲಯಗಳ ಶಿಖರಗಳಲ್ಲಿ ಇಂದಿಗೂ ಅವರ ಆತ್ಮದ ಶಕ್ತಿ ಸ್ಪಂದಿಸುತ್ತಿದೆ. ಇಂತಹ ವೀರರಾಣಿ ನಡೆದಾಡಿದ ಪ್ರದೇಶ ಈ ತುಳುನಾಡು. ಇಂತಹ ರಾಣಿ ಚೈತನ್ಯದ ಬಗ್ಗೆ ಪ್ರಚಾರ ತೀರಾ ಕಡಿಮೆ. ಇಲ್ಲವೇ ಇಲ್ಲ ಎನ್ನಬಹುದು. ಇಂತಹ ಸಂದಿಗ್ದ ಕಾಲಘಟ್ಟದಲ್ಲಿ ಮತ್ತೆ ಅಶಾಕಿರಣವೇ ಎಂಬಂತೆ ಮೂಡಬಿದ್ರೆಯ ''ಜವನೆರ್ ಬೆದ್ರ ಫೌಂಡೇಶನ್ " ಎಂಬ ಸಂಘಟನೆಯೊಂದು ವೀರರಾಣಿ ಅಬ್ಬಕ್ಕರ ಮೂರ್ತಿ ಕಲ್ಪನೆ ಮಾಡಿ ಸಾಕಾರ ಮಾಡಿದ್ದ ವಿಚಾರ ಸುದ್ದಿಯಾಗಲೇ ಇಲ್ಲ. ಮನೆ ಮನೆಗಳಲ್ಲಿ ರಾಣಿ ಅಬ್ಬಕ್ಕನ ಹೆಸರು ಧ್ವನಿ ಸಬೇಕಿತ್ತು. ಸಭೆ ಸಮಾರಂಭದಲ್ಲಿ ನಮ್ಮ ರಾಣಿ ಎಂದು ಜೈಕಾರ ಬೇಕಿತ್ತು. ಗೋಡೆ ಗೋಪುರಗಳಲ್ಲಿ ಧ್ವಜಗಳ ಮಧ್ಯದಲ್ಲಿ. ಗುಡಿ ಗೋಪುರಗಳಲ್ಲಿ ರಾಣಿಯ ಸಾಹಸದ ಮಾತುಗಳು ಪ್ರತಿಧ್ವನಿಯಾಗಬೇಕಿತ್ತು. ಇದಕ್ಕೆಲ್ಲಾ ಆರಂಭವೆಂಬಂತೆ ಒಂದು ಮೂರ್ತಿ ಸಂಕಲ್ಪ ಮಾಡಿ ಮೂಡಬಿದ್ರೆಯ ಅರಮನೆಯ ಅವರಣದಲ್ಲಿ ನಿಲ್ಲಿಸಿದ ಕಾರ್ಯ ಸಣ್ಣದೇನು ಅಲ್ಲ. ಈವಾಗ ಅಬ್ಬಕ ರಾಣಿಯೇ ಮೂರ್ತಿಯೊಳ ಗೆ ನಿಂತು ನಾನಿದ್ದೇನೆ ಎಂಬ ಭಾವದ ಸಂದೇಶ ಈ ಜಗತ್ತಿಗೆ ಕೊಡುವಂತಿದೆ. ಇದಕ್ಕಾಗಿ ಪರಿಶ್ರಮ ಕಲ್ಪನೆ ಮಾಡಿದ ಅಮರ್ ಕೋಟೆ ಎಂಬ ದೀಮಂತ ವ್ಯಕ್ತಿತ್ವ ಯಾಕೋ ಈ ತುಳುನಾಡ ಒಂದು ಮಾಣಿಕ್ಯ ಎನ್ನಲು ಅಡ್ಡಿ ಇಲ್ಲ ಎನ್ನುವ ಅನಿಸಿಕೆ ನನ್ನದು.
✍ಜಗದೀಶ್

0 Comments