ಕಾಂತಾರ ಕನ್ನಡ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಚಿತ್ರ. ಕಾಂತಾರ ಭಾಗ ೨ ಹೊಸ ದಾಖಲೆ ಬರೆದ ಚಿತ್ರ. ಸದ್ಯ ಕಾಂತಾರ ೧ ಮತ್ತೊಂದು ಇತಿಹಾಸ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ. ಅದರೆ ಈ ಮಧ್ಯೆ ಕಾಂತಾರಕ್ಕೆ ಕರಾವಳಿ ಭಾಗದ ದೈವ ಆರಾಧಕರಿಗೆ ಅಸಮಾಧಾನ ಮೂಡಿಸಿದೆ ಹಾಗೂ ದೈವದ ಹೆಸರಿನಲ್ಲಿ ಯಾರು ಹಣ ಮಾಡಬಾರದು ಎಂಬ ನುಡಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ನಡುವೆ ಕಾಂತಾರದ ನಿರ್ದೇಶಕ ರಿಷಬ್ ಶೆಟ್ಟಿ ನೇರವಾಗಿ ಪ್ರತಿಕ್ರಿಯೆಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿರುವ ರಿಷಬ್ ಶೆಟ್ಟಿ ದೈವದ ಅಪ್ಪಣೆಯನ್ನು ಪಡೆದು ಈ ಚಲನಚಿತ್ರ ನಿರ್ಮಿಸಲಾಗಿದೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ ಎಂದು ತಿಳಿಸಿದರು ಹಾಗೂ ಇದನ್ನು ಯಾವುದೇ ಮನರಂಜನೆಯ ವಿಷಯವಾಗಿ ಪರಿಗಣಿಸಬಾರದು ಎಂಬ ಡಿಸ್ಕ್ಲೈಮರ್ ಕೂಡ ಸೇರಿಸಲಾಗಿದೆ ಎಂದು ತಿಳಿಸಿದರು.

0 Comments