ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ವತಿಯಿಂದ ಫಿಡೆ ರೇಟೆಡ್ ರಾಪಿಡ್ ಚೆಸ್ ಚಾಂಪಿಯನ್ ಶಿಪ್ 2025 ಡಾ ಅಮರಶ್ರೀ ಅಮರನಾಥ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 18 ರಂದು ಮಂಗಳೂರಿನ ಟೌನ್ ಹಾಲ್ ನಲ್ಲಿ ಚಾಲನೆಗೊಂಡಿತು, ಏಷ್ಯನ್ ಚೆಸ್ ಚಾಂಪಿಯನ್ಶಿಪ್ ನಲ್ಲಿ ಬಂಗಾರದ ಹಾಗೂ ಬೆಳ್ಳಿಯ ಪದಕವನ್ನು ಗೆದ್ದ ಬಂಟ್ವಾಳ ಮೂಲದ ಯಶಸ್ವಿನಿಯವರನ್ನು ಸನ್ಮಾನಿಸಲಾಯಿತು, ಉದ್ಘಾಟನಾ ಸಮಾರಂಭದಲ್ಲಿ ಸುನಿಲ್ ಆಚಾರ್, ಭಾಸ್ಕರ್ ರೈ, ಮಂಜುನಾಥ್ ಜೈನ್, ಮಾಜಿ ಅಧ್ಯಕ್ಷರಾದ ರಮೇಶ್ ಕೋಟೆ ಹಾಗೂ ಮುಂತಾದವರು ಭಾಗವಹಿಸಿದ್ದರು.
200 ಕೂ ಅಧಿಕ ಚೆಸ್ ಕ್ರೀಡಾಪಟುಗಳು ರಾಜ್ಯಾದ್ಯಂತ ಈ ಚಾಂಪಿಯನ್ಶಿಪ್ ಅಲ್ಲಿ ಭಾಗವಹಿಸಲಿದ್ದು ಅಕ್ಟೋಬರ್ 19 ರಂದು ಈ ಚಾಂಪಿಯನ್ಶಿಪ್ ಸಮಾರೋಪಗೊಳ್ಳಲಿದೆ. ಡಿಸೆಂಬರ್ 26ರಿಂದ 30ರ ವರೆಗೆ ದಕ್ಷಿಣ ಕನ್ನಡ ಚೆಸ್ ಯಶೋಷಿಯೇಷನ್ ವತಿಯಿಂದ ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್ಶಿಪ್ ಮಂಗಳೂರಿನಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು
0 Comments