ದೇಶದ ಗಡಿಯಲ್ಲಿ ನಿಂತು ಹಗಲು-ರಾತ್ರಿ ಎಂದು ನೋಡದೆ ನಮ್ಮನ್ನು ಸುರಕ್ಷಿತವಾಗಿ ಕಾಯುವ ಸೈನಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮಾತನಾಡಬೇಕು ಬದಲಾಗಿ ಅವರಿಗೆ ಅವಮಾನ ಮಾಡಬಾರದು. ಸೈನಿಕರ ಕಾರ್ಯದ ಬಗ್ಗೆ ಎಂದು ಅನುಮಾನ ವ್ಯಕ್ತಪಡಿಸಿದರು. ಸೈನಿಕರ ಆತ್ಮಸ್ಥೈರ್ಯ ಕುಗ್ಗಿದರೆ ನಮ್ಮ ಅಸ್ತಿತ್ವವೇ ಅನುಮಾನವಾಗಿರುತ್ತದೆ. ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿಯೇ ದೇಶದ ಪ್ರಧಾನಿ ಹಾಗೂ ರಕ್ಷಣಾ ಸಚಿವರನ್ನೊಳಗೊಂಡಂತೆ ಪ್ರತಿಯೊಬ್ಬರು ಸೈನಿಕರ ಬಳಿ ತೆರಳಿ ಅವರಿಗೆ ಹೆಚ್ಚಿನ ಹುರುಪು ನೀಡಲು ಪ್ರಯತ್ನಿಸುತ್ತಾರೆ. ಅದರೆ ಕೆಲವೊಂದು ರಾಜಕೀಯ ನಾಯಕರ ಹೇಳಿಕಗಳು ಸೈನಿಕರ ಆತ್ಮಬಲವನ್ನು ಕುಗ್ಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಕ್ಕೆ ಕರ್ನಾಟಕದ ಕಾಂಗ್ರೆಸ್ ಶಾಸಕನ ಈ ಮಾತಿನಿಂದಲೇ ತಿಳಿಯುತ್ತದೆ.
ಕಾಂಗ್ರೆಸ್ ನ ಶಾಸಕ ಕೊತ್ತುರು ಮಂಜುನಾಥ್ ಕೇಂದ್ರ ಸರ್ಕಾರ ನಾಲ್ಕು ವಿಮಾನಗಳನ್ನು ಹಾರಿಸಿ ಬೂಟಾಟಿಕೆ ಪ್ರದರ್ಶಿಸಿದೆ ಎಂದು ಸೇನೆಯ ಕಾರ್ಯಚರಣೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಎಷ್ಟು ಉಗ್ರರು ಸತ್ತಿದ್ದಾರೆ.? ಏನು ಸಾಕ್ಷಿ.? ವಿಡಿಯೋ ಅಥವಾ ಪೋಟೋಗಳು ಹಳೆಯದ್ದು ಇರಬಹುದುಎ ಎಂದು ಹೇಳುವ ಮೂಲಕ ಸೇನೆಗೆ ಅವಮಾನ ಮಾಡಿದ್ದಾರೆ ಎಂಬ ವಿರೋಧಗಳು ವ್ಯಕ್ತವಾಗಿದೆ. ಇವರ ಹೇಳಿಕೆಗಳನ್ನು ಪರೋಕ್ಷವಾಗಿ ಕೆಲವು ಕಾಂಗ್ರೆಸ್ ನಾಯಕರು ಸಮರ್ಥಿಸಿದ್ದು ಮತ್ತಷ್ಟು ಆಕ್ರೋಶಕ್ಕೆ ಗುರಿಯಾಗಿದೆ. ಪ್ರತಿ ಬಾರಿ ಸಾಕ್ಷಿಗಳನ್ನು ಕೇಳುವ ಕಾಂಗ್ರೆಸ್ ಪಕ್ಷದ ಬುದ್ದಿ ಈ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಮುಂದುವರಿದಿದೆ ಎಂದು ಹೇಳಿದರೆ ತಪ್ಪಾಗಲಾರದು.

0 Comments