ನಿಮ್ಮ ಮನೆಯಲ್ಲಿ ತೆಂಗಿನಕಾಯಿ ಚಿಪ್ಪು(ಗೆರಟೆ) ಇದ್ದರೆ ನೀವೇ ಬಾಸ್

ನೀವೂ ಕೃಷಿಕರೆ ನಿಮ್ಮ ಮನೆಯಲ್ಲಿ ತೆಂಗಿನಕಾಯಿ ಕೃಷಿ ಇದೆಯಾ ಹಾಗಾದರೆ ನೀವೂ ಈ ಸುದ್ದಿ ಓದಲೇ ಬೇಕು. ಪ್ರಯೋಜನವಿಲ್ಲದಕ್ಕೂ ಒಂದು ಕಾಲದಲ್ಲಿ ಬೆಲೆ ಬಂದಿತೂ ಎಂಬ ಮಾತು ಈಗ ನಿಜವಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ. ಕಾಮಧೇನುವಿನಂತೆ ಕಲ್ಪವೃಕ್ಷದ ಪ್ರತಿಯೊಂದು ವಸ್ತುವೂ ಪ್ರಯೋಜನಕಾರಿ ಅದರೆ ಮಾರುಕಟ್ಟೆ ಹಾಗೂ ವ್ಯಾಪಾರ ದೃಷ್ಟಿಯಲ್ಲಿ ತೆಂಗಿನಕಾಯಿ ಅಥವಾ ಸೀಯಾಳಕ್ಕೆ ಮಾತ್ರ ಬೇಡಿಕೆ ಅದರೆ ಈಗ ತೆಂಗಿನಕಾಯಿಯನ್ನು ಹೊರತೆಗೆದ ನಂತರ ಮೇಲಿನ ಗೆರಟೆ ಅಥವಾ ಚಿಪ್ಪಿಗೆ ಭಾರೀ ಬೇಡಿಕೆಿ ಇದೆ. 

ಸೀಯಾಳವನ್ನೇ ಹೆಚ್ಚಾಗಿ ರೈತರು ಮಾರುತ್ತಿರುವುದರಿಂದ ಕೊಬ್ಬರಿಯನ್ನು ಯಾರು ಹೆಚ್ಚಾಗಿ ತಯಾರಿಸುತ್ತಿಲ್ಲ ಅದ್ದರಿಂದ ತೆಂಗಿನ ಚಿಪ್ಪಿಗೆ ಭಾರೀ ಬೇಡಿಕೆ ಬಂದಿದೆ. ೧ ಟನ್ ತೆಂಗಿನ ಚಿಪ್ಪಿಗೆ ೭೦೦೦ ದಿಂದ ೧೦೦೦೦ ಇದ್ದ ಬೆಲೆ ಈಗ ಟನ್ ಗೆ ಸರಿಸುಮಾರು ೨೬೦೦೦ ಗಳಷ್ಟು ಹೆಚ್ಚಾಗಿದೆ. ಇದ್ದಿಲಿಗೆ ಉಪಯೋಗವಾಗುವ ತೆಂಗಿನ ಚಿಪ್ಪಿಗೆ ಭಾರೀ ಬೇಡಿಕೆ ಇದೆ. ಕರ್ನಾಟಕದ ಭಾಗದಲ್ಲಿ ಬೆಳೆಯುವ ತೆಂಗಿನಕಾಯಿಯ ಚಿಪ್ಪಿನಲ್ಲಿ ೮೫% ಅಧಿಕ ಕಾರ್ಬನ್ ಅಂಶ ಇರುವುದರಿಂದ ಇಲ್ಲಿನ ತೆಂಗಿನ ಚಿಪ್ಪಿಗೆ ಬೇಡಿಕೆ ಜಾಸ್ತಿ. ಸದ್ಯ ತೆಂಗಿನಕಾಯಿಗೂ ಭಾರೀ ಬೆಲೆ ಇದ್ದು ಅದರಂತೆ ಚಿಪ್ಪಿಗೂ ಪ್ರತಿ ಕೆಜೆಗೆ ಸುಮಾರು ೨೦ ರಿಂದ ೨೬ ರೂಪಾಯಿಗಳಷ್ಟಿದೆ.  


Post a Comment

0 Comments