ಬಪ್ಪನಾಡು: ಪ್ರಸ್ತುತ ದಿನಗಳಲ್ಲಿ ಭಾರೀ ಸಂಚಲನ ಸೃಷ್ಟಿಸುತ್ತಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ ರಥ ಉರುಳಿ ಬಿದ್ದ ಘಟನೆ ಭಾರೀ ಸಂಚಲನ ಸೃಷ್ಟಿಸಿದೆ. ಮಾತ್ರವಲ್ಲದೆ ಇದಕ್ಕೆ ಏನು ಕಾರಣ ಎಂಬುದರ ಬಗ್ಗೆ ಭಕ್ತ ವರ್ಗದಲ್ಲಿ ದೊಡ್ಡ ಮಟ್ಟದ ಕಳವಳ ವ್ಯಕ್ತವಾಗಿದೆ.
ಈ ನಡುವೆ ಜಾರಂದಾಯ ದೈವ ತನ್ನ ದೈವ ನುಡಿಯಲ್ಲಿ ಆಡಿದ ಮಾತುಗಳು ಮತ್ತಷ್ಟು ಚರ್ಚೆಗೆ ಗ್ರಸವಾಗಿದೆ. ಈ ಎಲ್ಲಾ ಗೊಂದಲಮಯ ವಾತವರಣಗಳ ನಡುವೆ ಜನಸಾಮಾನ್ಯರಲ್ಲಿ ಮತ್ತೊಂದು ಚರ್ಚೆ ಹಾಗೂ ಮಾತುಗಳು ಆರಂಭವಾಗಿದೆ. ಈ ಮಾತಿಗೆ ಮೂಲ ಕಳೆದ ವರ್ಷ ಬಪ್ಪನಾಡು ಕ್ಷೇತ್ರದ ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ ನಡೆದ ಆ ಒಂದು ಘಟನೆ.ಆಡಳಿತ ವರ್ಗದವರ ಪ್ರಮಾದ; ಇತರರಿಗೆ ಬರೆ:
ಜಾತ್ರಾ ಮಹೋತ್ಸವದ ಶುಭಸಂಧರ್ಭದಲ್ಲಿ ರಥ ಉರುಳಿದ್ದು ಅಶುಭದ ಸಂಕೇತ ಎಂದು ಆನೇಕ ಭಕ್ತಗಣ ಕಳವಳ ವ್ಯಕ್ತಪಡಿಸಿದ್ದು ದೊಡ್ಡ ಮಟ್ಟದ ಪರ ಹಾಗೂ ವಿರೋಧದ ಚರ್ಚೆಗಳು ಆರಂಭವಾಗಿದೆ. ಈ ನಡುವೆ ಕಳೆದ ವರ್ಷ ಇದೇ ಬಪ್ಪನಾಡು ಕ್ಷೇತ್ರದ ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ ನಡೆದ ಆ ಒಂದು ಘಟನೆ ಸದ್ಯ ಭಾರೀ ಚರ್ಚೆಗೆ ಗ್ರಸವಾಗಿದೆ.
ದೇವಸ್ಥಾನದ ರಥ ಬಿದಿಯಲ್ಲಿ ನಿಂತಿದ್ದ ವಾಹನಗಳನ್ನು ರಥೋತ್ಸವದ ಸಂಧರ್ಭದಲ್ಲಿ ಎತ್ತಿ ಆಚೆ ಉರುಳಿಸಿದ್ದ ಘಟನೆ ಕಳೆದ ವರ್ಷ ಭಾರೀ ವೈರಲ್ ಆಗಿತ್ತು. ಸದ್ಯ ದೇವರ ರಥ ಉರುಳಿ ಬಿದ್ದಿರುವುದಕ್ಕೂ ಕಳೆದ ವರ್ಷ ವಾಹನಗಳನ್ನು ಎತ್ತಿ ಆಚೆ ಹಾಕಿರುವ ಘಟನೆಗೆ ಸಾಮ್ಯತೆ ಇದೆ ಎಂಬ ಮಾತುಗಳು ಕೇಳಿ ಬರಲು ಆರಂಭವಾಗಿದೆ.
ಆಡಳಿತ ವರ್ಗದ ದರ್ಪಕ್ಕೆ ಮುನಿದಲೇ ತಾಯಿ.?
ರಥ ಬಿದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಎಚ್ಚರ ವಹಿಸುವುದು ಹಾಗೂ ಅವುಗಳಿಗೆ ಸರಿಯಾದ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವುದು ಆಡಳಿತ ವರ್ಗದವರ ಜವಾಬ್ದಾರಿಯಾಗಿದ್ದು ಅದನ್ನು ಮಾಡದೇ ರಥ ಬೀದಿಯಲ್ಲಿದ್ದ ವಾಹನಗಳನ್ನು ಎತ್ತಿ ಬಿಸಾಕಿದ್ದು ತಪ್ಪು ಎಂಬ ಮಾತುಗಳು ಈಗ ಮುನ್ನಲೆಗೆ ಬರುತ್ತಿದೆ. ರಥ ಬೀದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದು ತಪ್ಪು ಅದರೆ ವಾಹನಗಳಿಗೆ ಸರಿಯಾದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಿದ್ದರೆ ಇಂತಹ ಸಂಧರ್ಭ ಒದಗಿ ಬರುತ್ತಿರಲಿಲ್ಲ ಎಂದು ಜನಸಾಮಾನ್ಯರು ಸದ್ಯ ಆಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂದು ದೇವರ ರಥೋತ್ಸವದ ಸಂಧರ್ಭದಲ್ಲಿ ದೇವರ ಎದುರೇ ವಾಹನಗಳನ್ನು ಎತ್ತಿ ಆಚೆ ಬಿಸಾಕಿರುವುದಕ್ಕೆ ತಾಯಿ ಮುನಿಸಿಕೊಂಡಿದ್ದಾಳೆೆ ಎನ್ನುವ ರೀತಿಯಲ್ಲಿ ಈ ಎರಡು ಘಟನೆಗಳಿಗೆ ಸಾಮ್ಯತೆ ಕಲ್ಪಿಸಲಾಗುತ್ತಿದೆ. ಒಟ್ಟಾರೆಯಾಗಿ ದೇವಿಯ ರಥ ಉರುಳಿ ಬಿದ್ದದ್ದು ಅಶುಭದ ಸಂಕೇತವಾಗಿದ್ದು ಇದಕ್ಕೆ ಕಾರಣವನ್ನು ಕಂಡುಕೊಂಡು ಸರಿಯಾದ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಜನಸಾಮಾನ್ಯರ ಮನದಾಸೆಯಾಗಿದೆ.
0 Comments