ಬಿಸಿಲಿನ ಬೇಗೆಯಿಂದ ತುಳುನಾಡು ಹಾಗೂ ಕರಾವಳಿಯ ಜನ ಸುಸ್ತಾಗಿದ್ದಾರೆ. ಸೂರ್ಯನ ಶಾಖವನ್ನು ತಡೆಯಲಾರದೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಎಸಿ, ಪ್ಯಾನ್ ಗಳು ಇರದೆ ಒಂದು ತಾಸು ಕುಳಿತುಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಸೂರ್ಯ ದೇವ ತನ್ನ ಪ್ರಭಾವವನ್ನು ಬೀರಿದ್ದಾರೆ. ಸಮುದ್ರದ ಕಡೆಯಿಂದ ಬರುವ ಬಿಸಿ ಗಾಳಿ ಜನರನ್ನು ಮತ್ತಷ್ಟು ಹೈರಾಣಗಿಸಿದೆ. ಬಿಸಿಲಿನ ಝಳದಿಂದ ಹೈರಾಣಗಿರುವ ದೇಹವನ್ನು ತಂಪಾಗಿಸಲು ನೀವೂ ಮಾರ್ಗವನ್ನು ಅನುಸರಿಸಿ. ಇದು ಒಂದು ಸಾಂಪ್ರದಾಯಿಕ ವಿಧಾನವಾಗಿದ್ದು ಇದನ್ನು ಅನುಸರಿಸಿದ ದೇಹಕ್ಕೂ ತಂಪು ಹಾಗೂ ಆರೋಗ್ಯಕ್ಕೆ ಒಳ್ಳೆಯದು.
ಬೇಸಿಗೆಯಲ್ಲಿ ಕುಡಿಯಿರಿ ಮಡಿಕೆಯ ನೀರು:
ಸಾಂಪ್ರದಾಯಿಕ ನೀರನ್ನು ಸಂಗ್ರಹಿಸುವ ವಿಧಾನಗಳಲ್ಲಿ ಒಂದಾದ ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರು ದೇಹಕ್ಕೂ ತಂಪು ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಂಡರೆ ನೀವೂ ನಿಜಕ್ಕೂ ಆಶ್ಚರ್ಯ ಪಡುತ್ತಿರಿ.


0 Comments