ರೈತ ಸೇನೆಯ ದಶಕದ ಹೋರಾಟಕ್ಕೆ ಕೊನೆಗೂ ಜಯ ಮೂಡಬಿದ್ರೆಗೆ KSRTC ಬಸ್ ಸೇವೆ

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ಮಧ್ಯೆ KSRTC ಬಸ್ ಸೇವೆ ಆರಂಭಿಸಿದ ಸರಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಮೂಡುಬಿದಿರೆ ರೈತ ಸೇನೆಯ ದಶಕದ ಹೋರಾಟಕ್ಕೆ ಜಯ ಸಿಕ್ಕಂತ್ತಾಗಿದೆ ಎಂದು ರೈತ ಸೇನೆ ಮೂಡುಬಿದಿರೆ ಘಟಕದ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಹೇಳಿದರು.

ಗುರುವಾರ ಬೆಳಿಗ್ಗೆ 7-45ಕ್ಕೆ ಮೂಡುಬಿದಿರೆ ನಿಲ್ದಾಣಕ್ಕೆ ಆಗಮಿಸಿದ ಸರಕಾರಿ ಬಸ್ಸನ್ನು ರೈತ ಸೇನೆ ವತಿಯಿಂದ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಗಿದೆ ಎಂದರು. ಕೊನೆಗೂ ಆರ್‌ಟಿಒ ಅಧಿಕಾರಿಗಳು  ಬಸ್ ಓಡಿಸಲು ಅನುಮತಿ ನೀಡಿದೆ. ನಮ್ಮ ಹೋರಾಟಕ್ಕೆ ಈಗ ಜಯ ಲಭಿಸಿದೆ ಎಂದರು. 



ಜನಪ್ರತಿನಿಧಿಗಳು ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿವೆ. ಅವರೆಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿ ಎಲ್ಲಾರ ಸಹಾಯವನ್ನು ಇದೇ ಸಂಧರ್ಭದಲ್ಲಿ ಸ್ಮರಿಸಿದರು. ರಾಜ್ಯ ರೈತ ಸೇನೆ ಪ್ರಮುಖರಾದ ರಮೇಶ್ ಬೋಧಿ, ಶಿವರಾಮ ಶೆಟ್ಟಿ, ವಿಶ್ವನಾಥ ಬೋವಿ, ಬಾಲಕೃಷ್ಣ ಡಿ. ಉಪಸ್ಥಿತರಿದ್ದರು.


Post a Comment

0 Comments